ಅಲೆಕ್ಸಿಸ್, ವಿಲಿಬಲ್ಡ್
(1798-1871). ಜರ್ಮನಿಯ ಪ್ರಸಿದ್ಧ ಚಾರಿತ್ರಿಕ ಕಾದಂಬರಿಕಾರ ಜಾರ್ಜ್‍ವಿಲ್‍ಹೆಲ್ಮ್ ಹೈನ್ರಿಚ್ ಹೇರಿಂಗ್‍ನ ಕಾವ್ಯನಾಮ. ಈತ 1823ರಲ್ಲಿ ಬರೆದ ವಲ್ಲಾಡ್ಮೊರ್ ಎಂಬ ಚಾರಿತ್ರಿಕ ಪ್ರೇಮಕಥಾನಕ ತುಂಬ ಯಶಸ್ವಿಯಾಯಿತು. ಡರ್‍ರೋಲಾಂಡ್ ಫಾನ್ ಬರ್ಲಿನ್, ಡರ್ ಫಾಲ್ಚೆ ವೊಲ್ಡೆಮಾರ್ ಮೊದಲಾದ ಈತನ ಚಾರಿತ್ರಿಕ ಕಾದಂಬರಿಗಳು ದೇಶಭಕ್ತಿಪ್ರೇರಕವಾಗಿದ್ದು ಜನಪ್ರಿಯವಾಗಿವೆ. ಮಹಾಕಾವ್ಯಗಳಲ್ಲಿ ಕಾಣುವ ಕಲ್ಪನೆಯ ವೈಭವವನ್ನು ಇವನ ಉತ್ಕøಷ್ಟ ಕಾದಂಬರಿಗಳಲ್ಲಿ ಕಾಣಬಹುದು.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ